ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ- ಘಟಿಕೋತ್ಸವ
ದಿನಾಂಕ 10-10-2024 ಗುರುವಾರ ದಂದು ಸಂಸ್ಥೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಅಖಿಲ ಭಾರತ ವೃತ್ತಿ ಪರೀಕ್ಷೆ ಆಗಸ್ಟ್ 2024 ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭ ನಡೆಯಿತು. ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೀತಾರಾಮ ಕೇವಳ ರವರು ರಾಷ್ಟ್ರೀಯ ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಿದರು ಮತ್ತು ವಿದ್ಯಾರ್ಥಿಗಳಿಗೆ ವಿತರಿಸಿ ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ದ .ಕ. ಗೌಡ ವಿದ್ಯಾಸಂಘ, ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ ವಹಿಸಿದ್ದರು. ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಎ.ವಿ. ನಾರಾಯಣ್, ಭಾರತ್ ಎಂಟರ್ಪ್ರೈಸಸ್ ಮಾಲಕರಾದ ಶ್ರೀಮತಿ ಕೃಷ್ಣವೇಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ದ.ಕ. ಗೌಡ ವಿಧ್ಯಾಸಂಘದ ಕೋಶಾಧಿಕಾರಿ ಶೀ ಮಾಧವ ಬೆಳ್ಳಾರೆ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ, ಶ್ರೀ ಜಯರಾಮ ಚಿಲ್ತಡ್ಕ , ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ, ಮಾಜಿ ಪ್ರಾಚಾರ್ಯರಾದ ಶ್ರೀ ಭವಾನಿ ಗೌಡ, ಮಾಜಿ ಕಛೇರಿ ಅಧೀಕ್ಷಕರಾದ ಶ್ರೀ ಉಮೇಶ್ ಯಂ. ಉಪಸ್ಥಿತರಿದ್ದರು. ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಶ್ರೀ ರವಿ ಮುಂಗ್ಲಿಮನೆ, ಗಣ್ಯರಾದ ಶ್ರೀ ಶ್ರೀಧರ ಕಣಜಾಲು, ಶ್ರೀ ಲಿಂಗಪ್ಪ ಗೌಡ ಭಾಗವಹಿಸಿದರು. ಸಂಸ್ಥೆಯ ಅಧ್ಯಾಪಕ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.
ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ-ಆಯುಧ ಪೂಜೆ
ದಿನಾಂಕ 10-10-2024 ಗುರುವಾರ ದಂದು ಸಂಸ್ಥೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಶಾರದಾ ಪೂಜೆ ಮತ್ತು ಕಾರ್ಯಾಗಾರದಲ್ಲಿ ಯಂತ್ರೋಪಕರಣ, ಹಾಗೂ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೀತಾರಾಮ ಕೇವಳ, ದ .ಕ. ಗೌಡ ವಿದ್ಯಾಸಂಘ, ಸುಳ್ಯ ಇದರ ಅಧ್ಯಕ್ಷರಾದ ಶ್ರೀ ಧನಂಜಯ ಅಡ್ಪಂಗಾಯ , ಮಾಜಿ ಶಾಸಕ ಮತ್ತು ಸಂಸ್ಥೆಯ ನಿರ್ದೇಶಕರಾದ ಶ್ರೀ ಸಂಜೀವ ಮಠಂದೂರು , ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಎ.ವಿ. ನಾರಾಯಣ್, ಭಾರತ್ ಎಂಟರ್ಪ್ರೈಸಸ್ ಮಾಲಕರಾದ ಶ್ರೀಮತಿ ಕೃಷ್ಣವೇಣಿ , ದ.ಕ. ಗೌಡ ವಿಧ್ಯಾಸಂಘದ ಕೋಶಾಧಿಕಾರಿ ಶೀ ಮಾಧವ ಬೆಳ್ಳಾರೆ, ಜೊತೆ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ , ಸಂಸ್ಥೆಯ ನಿರ್ದೇಶಕರಾದ ಶ್ರೀ ಚಿದಾನಂದ ಬೈಲಾಡಿ, ಶ್ರೀ ಜಯರಾಮ ಚಿಲ್ತಡ್ಕ , ಶ್ರೀ ಮುರಳೀಧರ ಕೆಮ್ಮಾರ, ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ, ಮಾಜಿ ಪ್ರಾಚಾರ್ಯರಾದ ಶ್ರೀ ಭವಾನಿ ಗೌಡ, ಮಾಜಿ ಕಛೇರಿ ಅಧೀಕ್ಷಕರಾದ ಶ್ರೀ ಉಮೇಶ್ ಯಂ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಶ್ರೀ ರವಿ ಮುಂಗ್ಲಿಮನೆ, ಗಣ್ಯರಾದ ಶ್ರೀ ಶ್ರೀಧರ ಕಣಜಾಲು, ಶ್ರೀ ಪ್ರವೀಣ್ ಕುಂಟ್ಯಾಣ, ಶ್ರೀ ಲಿಂಗಪ್ಪ ಗೌಡ ಭಾಗವಹಿಸಿದರು. ಸಂಸ್ಥೆಯ ಅಧ್ಯಾಪಕ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.
ಅಖಿಲ ಭಾರತ ವೃತ್ತಿ ಪರೀಕ್ಷೆ -ಆಗಸ್ಟ್ 2024 – ಪರೀಕ್ಷಾ ಕೇಂದ್ರ ಅಧ್ಯಕ್ಷರು ಮತ್ತು ಕೇಂದ್ರ ವೀಕ್ಷಕರ ಭೇಟಿ
ಸ್ವಾತಂತ್ರ್ಯ ದಿನಾಚರಣೆ 2024 ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ
ನಮ್ಮ ಸಂಸ್ಥೆಯು ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರವಾಗಿದ್ದು 2024 ಆಗಸ್ಟ್ 12 ರಿಂದ ಆಗಸ್ಟ್ 17 ವರೆಗೆ ಪರೀಕ್ಷೆ ನಡೆಯಿತು
ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ — ಕ್ಯಾಂಪಸ್ ಆಯ್ಕೆ
ಬೆಂಗಳೂರಿನ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಲಿಮಿಟೆಡ್ ಮತ್ತು ಪುತ್ತೂರಿನ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ಮಾಸ್ಟರ್ ಪ್ಲಾನರಿ ಸಂಸ್ಥೆಯಿಂದ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ, ಇಲೆಕ್ಟ್ರೀಶಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ಮತ್ತು ಡ್ರಾಪ್ಟ್ಸಮೆನ್ ಸಿವಿಲ್ ವೃತ್ತಿಯ ಒಟ್ಟು 63 ತರಬೇತಿದಾರರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ
“ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಕ್ಯಾಂಪಸ್ ಆಯ್ಕೆ”
ಬೆಂಗಳೂರಿನ ಗೃಹೋಪಯೋಗಿ ಉಪಕರಣಗಳ ಉತ್ಪಾದನೆಯಲ್ಲಿ ತೊಡಗಿರುವ ಪ್ರತಿಷ್ಠಿತ ಸ್ಟೋವ್ ಕ್ರಾಫ್ಟ್ ಸಂಸ್ಥೆಯು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ದಿನಾಂಕ 17-06-2023 ಶನಿವಾರದಂದು ಕ್ಯಾಂಪಸ್ ಆಯ್ಕೆ ಕಾರ್ಯಕ್ರಮ ನಡೆಸಿತು. ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ, ಸುಳ್ಯದ ಕೆವಿಜಿ ಐಟಿಐ, ನರಿಮೊಗರು ಸರಕಾರಿ ಮಹಿಳಾ ಐಟಿಐ, ವಿಟ್ಲದ ಸರ್ಕಾರಿ ಐಟಿಐ , ವಿಟ್ಲದ ಸುಪ್ರಜಿತ್ ಐಟಿಐ, ಒಡಿಯೂರಿನ ಗುರುದೇವ ಐಟಿಐ, ಮತ್ತು ನಿಂತಿಕಲ್ಲಿನ ಪರಿವಾರ ಪಂಚಲಿಂಗೇಶ್ವರ ಐಟಿಐ ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
“ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ -ಅಖಿಲ ಭಾರತ ವೃತ್ತಿ ಪರೀಕ್ಷೆ ಪ್ರಾರಂಭ”
ಶ್ರೀ ಮಹಾಲಿಂಗೇಶ್ವರ ಐಟಿಐಯ ಪರೀಕ್ಷಾ ಕೇಂದ್ರದಲ್ಲಿ ನಾಳೆ ಸೋಮವಾರ ದಿನಾಂಕ 3-7-2023 ರಿಂದ ಅಖಿಲ ಭಾರತ ವೃತ್ತಿ ಪರೀಕ್ಷೆ ಆರಂಭವಾಗಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ, ವಿಟ್ಲದ ಸರ್ಕಾರಿ ಐಟಿಐ, ವಿಟ್ಲದ ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಗುರುದೇವಾನಂದ ಐಟಿಐ ಗಳ
ವಿವಿಧ ವೃತ್ತಿಗಳ ಒಟ್ಟು 596 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
“ಶ್ರೀ ಮಹಾಲಿಂಗೇಶ್ವರ ಐಟಿಐ : ಸ್ವಾತಂತ್ರ್ಯ ದಿನಾಚರಣೆ”
ಕೊಂಬೆಟ್ಟಿನ ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಯಸ್ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೇಶವ ಅಮೈ ರವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಐಟಿಐ ವಿದ್ಯಾರ್ಥಿಗಳು ಉದ್ಯೋಗ ಅವಕಾಶಕ್ಕಾಗಿ ಕಾಯದೆ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಶ್ರೀ ಜಯರಾಮ ಚಿಲ್ತಡ್ಕ , ಅಂತಾರಾಷ್ಟ್ರೀಯ ಮಟ್ಟದ ಗೋಲ್ಡ್ಮನ್ ಸಾಕ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪ್ರದೀಪ್ ರಾಮಕೃಷ್ಣ ಗೌಡ, ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ವಿಶ್ರಾಂತ ಪ್ರಾಚಾರ್ಯರಾದ ಶ್ರೀ ಭವಾನಿ ಗೌಡ, ಶ್ರೀಮತಿ ವಚನಾ ಪ್ರದೀಪ್ , ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಉಮೇಶ್ ಯಂ, ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪೈ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಶ್ರೀಮತಿ ವಸಂತಿ ವಂದನಾರ್ಪಣೆ ಸಲ್ಲಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು , ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.
“Sports meet of the Old students by Alumni Association in our ITI on 09-04-2023 in the presence of Puttur Sri Mahalingeshwara temple Trustee Sri Ramdas Gowda S, Correspondent Sri U P Ramakrishna, Directors Sri Kishore Kumar & Sri Jayaram Chilthadka , Retd Principal Sri Bhavani Gowda, Ex O.S.& PRO Sri Umesh M, Principal Sri Prakash Pai B, Alumni association president Sri Harikrishna P N , Hon President Sri Pundalika Prabhu & Member Sri Santhosh Kumar.”
" INAUGURATION FUNCTION OF KOWSHALYA SABHA BHAVANA" and "COMPUTER LAB" in our ITI on 22-01-2023 under the holy presence of Sri .Sri. Sri. Nirmalanathananda Swamiji, Ex-CM and MP Sri D.V. Sadananda Gowda , Sri. Sanjeeva Matandoor , MLA, Puttur, Board of DIrectors (SMITI), Donors, Old students , Staff members and all the trainees .
Convocation Ceremony 2022 & felicitation of Vasanth Devasya ex-army, also our alumni in the presence of our MLA, Sri Sanjeeva Matandoor in SMITI.
Flag hoisting & Prize distribution in SMITI on 15/08/2022
ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರು, ಕ್ಯಾಂಪಸ್ ಆಯ್ಕೆ
ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ಕ್ಯಾಂಪಸ್ ಸಂದರ್ಶನ
ಬೆಂಗಳೂರಿನ ಇಲೆಕ್ಟ್ರೀಕಲ್ ತ್ರಿಚಕ್ರ ವಾಹನ ಉತ್ಪಾದನೆ ಮಾಡುತ್ತಿರುವ ಅಲ್ಟಿಗ್ರೀನ್ ಡ್ರೈವ್ ಇಲೆಕ್ಟ್ರಿಕ್ ಕಂಪೆನಿಯವರು ದಿನಾಂಕ 22-06-2022 ಬುಧವಾರ ಕ್ಯಾಂಪಸ್ ಸಂದರ್ಶನ ನಡೆಸಿದರು. ಗೌಡ ವಿದ್ಯಾ ಸಂಘ (ರಿ) ಸುಳ್ಯದ ಜೊತೆ ಕಾರ್ಯದರ್ಶಿ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ನಿರ್ದೇಶಕ ಶ್ರೀ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಶುಭಹಾರೈಸಿದರು. ಶ್ರೀ ಮಹಾಲಿಂಗೇಶ್ವರ ಐಟಿಐ, ಸರಕಾರಿ ಐಟಿಐ ನರಿಮೊಗರು, ಸರಕಾರಿ ಐಟಿಐ ವಿಟ್ಲ, ಒಡಿಯೂರು ಗುರುದೇವ ಐಟಿಐ, ಕೆವಿಜಿ ಐಟಿಐ ಸುಳ್ಯ, ಬೆಥನಿ ಐಟಿಐ ನೆಲ್ಯಾಡಿ, ಶ್ರೀ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಸಂಚಾಲಕರಾದ ಶ್ರೀ ಯು. ಪಿ. ರಾಮಕೃಷ್ಣ ಅವರ ಮಾರ್ಗದರ್ಶನದ ಅನುಸಾರವಾಗಿ ಕಾರ್ಯಕ್ರಮ ನಡೆಯಿತು.
Valedictory function of Sri Umesh.M after his retirement as O.S,in SMITI On 31/01/2022 in the presence of Sri Sanjiv Matandoor,MLA,PUTTUR. All Management members, staff were present.
MOU between SRK Laders & SMITI ,PUTTUR On 29/01/2022 .Keshava.A,Proprietor SRK,Chidananda Bilady,Prakash Pai,Principal were present
ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ ಆರಂಭ.
ದಿನಾಂಕ 13-12-2021 ರಂದು ವಿಟ್ಲದ ಸರ್ಕಾರಿ ಐಟಿಐ ಮತ್ತು ಸುಪ್ರಜಿತ್ ಐಟಿಐ ಮತ್ತು ಒಡಿಯೂರಿನ ಶ್ರೀ ಗುರುದೇವಾನಂದ ಐಟಿಐಯನ್ನು ಒಳಗೊಂಡಿರುವ ತಾಲೂಕು ಪರೀಕ್ಷಾ ಕೇಂದ್ರವಾದ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರಿನಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ ಪ್ರಾರಂಭವಾಗಿದೆ.. ಪ್ರಥಮ ಮತ್ತು ದ್ವಿತೀಯ ವರ್ಷದ ಸಿವಿಲ್,ಇಲೆಕ್ಟ್ರೀಶಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್, ಪಿಟ್ಟರ್, ಮೆಕಾನಿಕ್ ಮೋಟಾರ್ ವೆಹಿಕಲ್ ಮತ್ತು ಮೆಕಾನಿಕ್ ಏರ್ ಕಂಡೀಷನಿಂಗ್ ಮತ್ತು ರೆಪ್ರಿಜರೇಶನ್ ವೃತ್ತಿಗಳ ಒಟ್ಟು 409 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಅಧ್ಯಕ್ಷರಾದ ಮಳವಳ್ಳಿಯ ಸ್ಟಾರ್ಕ್ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀ ಸಯ್ಯದ್ ಅಕ್ಬರ್ ಪಾಶಾ ನಿರ್ದೇಶನದಲ್ಲಿ ಪರೀಕ್ಷೆ ನಡೆಯಿತು.